Thursday, January 20, 2011

ನೆನಪಿನ ದೋಣಿಯಲಿ….

      ಜೀವನದ ಪಯಣದಲ್ಲಿ ಬಂದು ಹೋದ ಎಷ್ಟೋ ಜೀವಗಳು, ಘಟನೆಗಳು ನೆನಪುಗಳಾಗಿ ಉಳಿದು ಬದುಕನ್ನು ಹೊಸ ದಿಗಂತಕ್ಕೆ ತಲುಪಿಸುತ್ತದೆ. ಆ ನೆನಪಿನ ದೋಣಿಯಲಿ ಒಂದು ಸುಂದರ ವಿಹಾರ…


ಸಾಗಲಿ ಗುರಿ ಸೇರಲಿ
ಬಾಳಿಗೊಂದು ಗುರಿ ಇರಲಿ,
ಆ ಗುರಿಯ ಸೇರೋ ಛಲಹ ಒಂದು ನಿನಗಿರಲಿ,
ಆಗುವದೋ, ಹೋಗುವದೆ, ಎಂಬ ಅಳಕು ದುರಿರಲಿ,
ಎಡರುಗಳು, ತೊಡರುಗಳು, ಅಡಿಗಡಿಗೆ ಬರಬಹುದು
ಬೆಚ್ಚದಿರು, ಬೆದರದಿರು!
ಎದುರಿಸಿ, ನೀ ನಡೆದರೆ ಜಯವಗುವದು !!ಪ !!

ಜಯಸಿದ ಬಳಿಕ! ಮರೆಯದಿರು ಮೈ ಮರೆಯದಿರು!
ಮರೆತವರೆಲ್ಲಾ ನೀ ಅಳಿಯದಿರು!
ಸತ್ಯವ ನೀ ಮರೆಯದಿರು,  ಸತ್ಯವ ಮರೆಯದಿರು !!ಪ !!

     

       ಭಾರತವು ವಿಶಾಲವಾದ ದೇಶ, ಅದು ಉತ್ತರಕ್ಕೆ ಹಿಮಾಲಯದಿಂದ ಆವೃತವಾಗಿದೆ , ಹಾಗೂ ಮೂರೂ ಬಾಗ ಸಮುದ್ರದಿಂದ ಆವೃತವಾಗಿದೇ, ಪೂರ್ವಕ್ಕೆ ಅರಬ್ಬೀ ಸಮುದ್ರ, ಪಶ್ಚಿಮಕ್ಕೆ ಬಂಗಾಳಕೊಲ್ಲಿ, ಹಾಗೂ ದಷ್ಕಿನಕ್ಕೆ ಹಿಂದುಮಹಸಗರದಿಂದಾ  ಆವೃತವಾಗಿದೆ,

        ಪ್ರಪಂಚದಲ್ಲಿ ನಮ್ಮ ಭಾರತ ದೇಶವು ಶೇ ೨.೪% ರಷ್ಟು  ಭುಬಾಗವನ್ನು ಹೊಂದಿದೆ, ಇದರ ಅಂದರೆ ಭಾರತ ದೇಶದ ಒಟ್ಟು ವಿಸ್ತಿರಣ ೩೨.೮೭.೨೬೩ ಚ, ಕಿ, ಮಿ. ಇದು ವಿಸ್ತಿರಿಸಿದೆ, ಸುಮಾರಾಗಿ ಭಾರತ ದೇಶಕ್ಕೆ ಭಾರತ ಎಂದು ಬರಲು ಕಾರಣವೇನೆಂದರೆ, ರಾಮಾಯಣದಲ್ಲಿ ಧಶರಥನ ಮಕ್ಕಳಾದ ಭರತ, ಶ್ರೀರಾಮ, ಲಷ್ಕಮನ, ಈ ಮೂವರಲ್ಲಿ ಧಶರಥನ ಮಾತಿನಂತೆ ಶ್ರೀರಾಮ, ಕಾಡಿಗೆ ಹೋದಾ, ಶ್ರೀರಾಮ ಆಜ್ಞೆಯಂತೆ ಭರತ ರಾಜ್ಯಬಾರ ಮಾಡಿದನು, ಭರತನ್ನಲಿದ  ದೇಶವನ್ನು ಭಾರತ ಎಂದು ಕರೆಯಲಾಗಿದೆ,
        " ಭಾರತ ಭೂಮಿ ನನ್ನ ತಾಯಿ, ನನ್ನ ಪೊರೆವ ತೊಟ್ಟಿಲು " ಜೀವನವನ್ನೇ ದೇವಿಗೆ ಎರೆವೆ, ಅವಳ ಖ್ಯಾತಿ ಹೆಚ್ಹಿಸಲು ಕನ್ನಡದ ಕನ್ಮನಿಗಳಾದ, ಕುವೆಂಪು, ದ.ರಾ.ಬೇಂದ್ರೆ, ಗಿರೀಶ್ ಕಾರ್ನಾಡ, ವಿ.ಕೃ. ಗೋಕಾಕ್. ಇನ್ನೂ ಮುಂತಾದವರು. ಅಮರಗಿತೆಯೊಂದಿಗೆ ತಮ್ಮ ಸಾಲುಗಳಾಗಿ, ಕರ್ನಾಟಕ ಸಂಷ್ಕ್ರುತಿಯ ಸ್ವರೂಪ ಅದರ ಬಣ್ಣ ಬಣ್ಣದ ಒಡಲನ್ನು ಚಿತ್ರವತ್ತಾಗಿ, ನೆಯ್ದಿರುವ ಅದರ ಹಾಸು ಹೊಕ್ಕಿನ ಎಳೆಗಳು ಭಾರತೀಯ ಸಂಯುಕ್ತ ಶರೀರವನ್ನು ಕರ್ನಾಟಕ ಅಲಂಕರಿಸಿದೆ.
        ಭರತ ಖಂಡದ ಸಂಸೃತಿ ವಿಶ್ವದ ಅನೇಕ ಪ್ರಾಚಿನ ಸಂಸ್ಕ್ರತಿಗಿಂತಲೂ ಪ್ರಾಚಿನ, ಅಧುನಿಕ, ಸಂಸ್ಕ್ರತಿಗಿಂತಲೂ ಆಧುನಿಕ,  ಕಾಲದಲ್ಲಿ ಪ್ರಾಚಿನ ದೃಷ್ಟಿಯಲ್ಲಿ ಆದುನಿಕವಾದ ಭಾರತೀಯ  ಸಂಸ್ಕ್ರತಿಯು ಪ್ರಾಚಿನ ಆರ್ವಚಿನಗಲೆರದನ್ನು, ಹೊಂದಿದ ಸಾಮರಸ್ಯದ ಶಕ್ತಿ ಭಾರತೀಯ  ಸಂಸ್ಕ್ರತಿಗಿದೆ, ಹಳೆ ಬೇರು ಹೊಸ ಚಿಗುರುಗಳು, ಎರಡು ಸೇರಿವೆ.
        ಜಗತ್ತಿನ ಉಳಿದ ಖ್ಯಾತ ಸಂಸ್ಕ್ರತಿಗಳಂತೆ ಕಾಲ ಪ್ರವಾಹದಲ್ಲಿ ಭಾರತೀಯ ಸಂಸ್ಕ್ರತಿಯು ಕೊಚ್ಚಿ ಹೋಗಿದೆ, ಅನುಬವದಿಂದ ಪರಿಪುಷ್ಟಗೊಲ್ಲುತ್ತ, ಬೆಳೆದು ಬಂದಿದೆ, ಅನೇಕ ಅಘಾತಗಳನು ಏದುರಿಸಿಯು ತನ್ನ ಚೇತನವನ್ನು ಉಳಿಸಿಕೊಂಡು ಬಂದಿದೆ ಕಾಲದ ಪ್ರವಾಹದಲ್ಲಿ ಚಿರಂತನವಾಗಿ ಉಳಿಯುವಂತ ತನ್ನ ಮೂಲಭೂತ ಮೊಲ್ಯಗಳನ್ನು ಉಳಿಸಿಕೊಂಡು ಅಳವಡಿಸಬೇಕೊಂದು, ಬದುಕತ್ತಲಿದೆ. ಈ ಸಂಸ್ಕ್ರತಿಯು ಈ ಸಂಸ್ಕ್ರತಿಯ ವ್ರುಷ್ಕಕ್ಕೆ ಪೆಟುಗಳು ಬಿದ್ದಾಗಲೆಲ್ಲಾ ಹೊಸ ಶಾಲೆಗಳು ಕವಲೊಡೆದು ನಳನಳಿಸಿ ಬೆಳೆದಿದೆ.
       ಭಾರತವು ವಿಶಾಲತೆ, ಅಲ್ಲಿರುವ ವೈವಿಧ್ಯತೆ ಅವುಗಳ ಮದ್ಯೆ ಏಕಸುತ್ರವನ್ನು ಹೊಂದಿದ ಭಾರತ ಸಂಸ್ಕ್ರತಿ ದೃಷ್ಟಿಗಳು ಸೇರಿ ಸಮಷ್ತಿಯಾಗಿದೆ, "ಸಮಗ್ರತೆ " ಭಾರತೀಯ ಸಂಸ್ಕ್ರತಿಯ ವೈಶಿಷ್ಯ " ವಿಪುಲತೆ " ಭಾರತೀಯ ಸಂಸ್ಕ್ರತಿಯ ಇನೊಂದು "ವಿಭಿನ್ನತೆ" ಈ ಸಂಸ್ಕ್ರತಿಯ ಹಿರಿದಾದ ಮತ್ತೊಂದು ವೈಶಿಷ್ಕ್ತಿವಾಗಿದೆ.

        "ತೆನೆ ತೆನೆ ಕುಡಿದರೆ ರಾಸಿ, ಹನಿ ಹನಿ ಕುಡಿದರೆ ಹಳ್ಳ " ಎಂಬ ಗದೆಯ ವಾಣಿಯಂತೆ ಭಾರತ ಹಿರಿದಾದ ಸಂಸ್ಕ್ರತಿಗೆ ಈ ದೇಶದ ಸಮಸ್ತ ಜನರ ಬದುಕು, ಬದುಕಿನ ರಿತಿ, ಸೃಜನತೆಗಳೇ ಈ ಸಂಸ್ಕ್ರತಿಗೆ ಕಾರಣವಾಗಿದೆ. 
      
       ಬೆಳಗಾಂಮ ಎಂಬ ಜಿಲ್ಲೆಯ ನೇಸರ್ಗಿ ಎಂಬ ಒಂದು ಸುಂದರ ಊರಿಂದ ಶುರುವಾಯಿತು ಈ ನನ್ನ ಜೀವನ. ಅಲ್ಲಿಂದ ಶುರುವಾದ ಈ ನನ್ನ ಜೀವನ ಮಣಿಪಾಲ ಎಂಬ ಕಣ್ಣು ಕುಕ್ಕುವ, ಬಲು ಜನನಿಭಿಢ ಸ್ಥಳಕ್ಕೆ ಇಂದು ಬಂದು ನಿಂತಿದೆ. ಏಕೆ ನಿಂತಿದೆ, ಹೇಗೆ ನಿಂತಿದೆ ಎಂಬುದು ನನ್ನ ಮನಸ್ಸಿನಲ್ಲಿರುವ ವಸ್ತು ವಿಷಯ. ಎಲ್ಲರಂತೆಯೇ ನಾನು  ತಂದೆ-ತಾಯಿಯೊಡನೆ ಜೊತೆಗೂಡಲಿಲ್ಲ , ಅಣ್ಣನೊಂದಿಗೆ ಆಟವಾಡುತ್ತಾಲಿಲ್ಲಾ, ಜಗಳವಾಡುತ್ತಾ ಬೆಳದ ನಾನು ಬಾಗಲಕೋಟೆ ಜಿಲ್ಲೆಯ ಬಿಳಗಿ  ತಾಲೂಕಿನ ಸಿದ್ದಪುರ್ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಾಲೆಯನ್ನು ಮುಗಿಸಿ, ಕನ್ನಡ ಮಾಧ್ಯಮದಲ್ಲಿ ಹೈ-ಸ್ಕೂಲ್ ಮುಗಿಸಿ, ಮುಂದಿನ ವ್ಯಾಸಂಗಕ್ಕಾಗಿ, ನೇಸರ್ಗಿಗೆ ಬಂದೆ  ಕಂಪ್ಯೂಟರ್ ಶಿಕ್ಷಣವನ್ನು ಪಡೆದು, ಚಿಪ್ ಡಿಸೈನ್ ಮಾಡುತ್ತಾ,  ಸಾಫ್ಟ್ ವೇರ್ ಇಂಜಿನಿಯರ್ ಆಗಿ ಒಂದು ಸಾಫ್ಟ್ ವೇರ್ ಸಂಸ್ಥೆಯಲ್ಲು ಕೆಲಸ ಮಾಡುತ್ತಿದ್ದೇನೆ. ವಿದ್ಯಾಭ್ಯಾಸ ಮುಗಿಸುತ್ತಾ, ಕೆಲಸ ಮಾಡುತ್ತಾ  ಜವಾಬ್ದಾರಿ ಏನೆಂಬುದನ್ನು ಅರಿತೆ,  ಕೇವಲ ನನ್ನ ಜೀವನ ವಸತಿಯಲ್ಲೇ ಬೆಳೆಯುತ್ತಾನೆ ಸಾಗಿತು ನನ್ನ ಜೀವನ. ಮಧ್ಯದಲ್ಲಿ ಎಷ್ಟೋ ಭಾವನೆಗಳ ಸಂಘರ್ಷದೊಂದಿಗೆ ಬದುಕು ಎಂದರೇನು, ಸ್ನೇಹ ಹಾಗೂ ಪ್ರೀತಿ ಎಂದರೇನು ಎಂಬುದನ್ನು ಅರಿಯುತ್ತಾ ಬೆಳೆದೆ. ಬುದ್ದಿಯು ಬಲಿಯುತ್ತಾ, ಕಾಲವು ಕಳೆಯುತ್ತಾ ಜೀವನ ಎಂದರೇನು ಎಂಬ ವಿಷಯವು ಪ್ರಶ್ನೆಯಾಗತೊಡಗಿದೆ.
      ಜೀವನ ಎಂದರೇನು? ತುಂಬಾ ದಿವಸದಿಂದ ಈ ಪ್ರಶ್ನೆಯು ನನ್ನ ತಲೆಯಲ್ಲಿ ಸರಿದಾಡುತ್ತಿದೆ. ಈ ಪ್ರಶ್ನೆಯು ಆಳವಾಗಿ ಮನಸ್ಸನ್ನು ಹೊಕ್ಕಲು ಅದರ ಬೇರು ದೇಹವನ್ನೆಲ್ಲಾ ಆಕ್ರಮಿಸತೊಡಗಿದೆಯೇನೋ ಎಂಬ ಭಾವ ನನ್ನಲ್ಲಿ ಮೂಡುತಿದೆ.ಈ ಭಾವದ ಜೊತೆಗೆ ಹಲವಾರು ಪ್ರಶ್ನೆಗಳು ಸಹ ನನ್ನ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತಿದೆ. ಈ ಜೀವನ ಎಂದರೇನು? ಎಂಬ ಪ್ರಶ್ನೆಗೆ ಹಲವಾರು ಪ್ರಶ್ನೆಗಳು ಉತ್ತರವಾಗಿ ಕಾಣುತ್ತಿದೆ. ಎಷ್ಟೇ ಉತ್ತರ ನೀಡಿದರು ಸಂಪೂರ್ಣ ಉತ್ತರ ಸಿಗಲಿಲ್ಲವೆಂಬ ಭಾವ. ಈ ಪ್ರಶ್ನೆ ಹಾಗೂ ಉತ್ತರಗಳ ಕಲಹದಲ್ಲ ನನಗನ್ನಿಸಿದ ಎಷ್ಟೋ ವಿಷಯಗಳನ್ನು ಬರೆಯಬೇಕಾಗಿ ಎಷ್ಟೋ ಸಲ ಅನ್ನಿಸಿದ್ದರೂ ಅದಕ್ಕೆ ಒಂದು ಸ್ಪಷ್ಟ ಚಿತ್ರ ನೀಡಲು ಸಾಧ್ಯವಾಗಿರಲಿಲ್ಲ. ಆ ವಿಷಯಗಳಿಗೆ ಒಂದು ಚಿತ್ರವನ್ನು ನೀಡುವ ಪ್ರಯತ್ನವೇ ಈ ಬರವಣಿಗೆ.
      ಹುಟ್ಟಿದ ಕೆಲವು ದಿನಗಳಿಗೆ ಮಾತು ಬರದೆ ಹೇಳಲು ಆಗದೆ ತನಗೆ ಏನು ಬೇಕೆಂಬುದನ್ನು ಸಂಘ್ನೆಯಲ್ಲಿ ಅಮ್ಮನಿಗೆ ಮಾಡಿತೋರಿಸಿ ಪಡೆಯುವುದರಲ್ಲಿದೆಯಾ ಜೀವನ? ಅಂಬೆಗಾಲಿನಿಂದ ಹಿಡಿದು ನಡೆದು, ಓಡುವುದರಲ್ಲಿದಯಾ ಜೀವನ? ಮಾತು ಕಲಿತು ಅಮ್ಮನೊಂದಿಗೆ ಮೊದಲು ಪ್ರೀತಿಯಿಂದ ನಂತರ ಗದರುಮಾತಿನಲ್ಲಿದಯಾ ಜೀವನ? ಜೀವನದುದ್ದಕ್ಕೂ ಎದುರಾಗುವ ಪರೀಕ್ಷೆಗಳಲ್ಲಿ ಸೋಲುವುದು ಅಥವಾ ಗೆಲ್ಲುವುದರಲ್ಲಿದೆಯಾ ಜೀವನ? ಸ್ನೇಹದಲ್ಲಿ ಮುಳುಗಿ ಅದರ ನೋವು ಸುಖಗಳನ್ನು ಅನುಭವಿಸಿ, ಪ್ರೀತಿಯ ಬಿಸಿಲು ಕುದುರೆಯನ್ನು ಏರಿ ಅದು ಕರೆದೊಯ್ಯುವ ಕಡೆ ಹೋಗುವುದಾ ಜೀವನ? ಇಲ್ಲಿಯವರೆಗೂ ಅನುಭವಿಸಿದ ಕಷ್ಟ ನೋವುಗಳ ಸರಪಣಿಗಳೂ ಸಾಕು ಎಂದು ವೃತ್ತಿಪರ ಶಿಕ್ಷಣದಲ್ಲಿ ತೊಡಗಿ, ಕೆಲಸಕ್ಕೆ ಸೇರಿದ ಒಂದೆರಡು ತಿಂಗಳುಗಳಲ್ಲಿ ಅದರ ರುಚಿ ಒಗರೆಂದು ತಿಳಿದು, ಮೊದಲು ಕೆಲವು ಸಂಬಳದ ಹಣವನ್ನು ಮನಸ್ಸು ಬಂದಂತೆ ಖರ್ಚು ಮಾಡಿ, ತಂದೆ-ತಾಯಿಗೆ, ಅಣ್ಣನಿಗೆ, ಸ್ನೇಹಿತರಿಗೆ ಉಡುಗೊರೆಗಳನ್ನು ಕೊಡುವುದಾ ಜೀವನಾ? ಸಮಯ ಕಳೆದಂತೆ ವೃತ್ತಿಯೂ ಸಹ ಒಂದು ದಿನಚರಿಯಾಗಿ, ದೈನಂದಿನ ಕೆಲಸಗಳನ್ನು ಮಾಡುವಂತೆ, ವೃತ್ತಿಯನ್ನೂ ಸಹ ಒಂದು ಯಂತ್ರದಂತೆ ನಿರ್ವಹಿಸುವುದು ಜೀವನಯಾ?? ಯಾವುದು ಜೀವನ??
       ಜೀವನವೆಂಬುದು ಆಸಕ್ತಿಯಾ??? ಗೊತ್ತಿಲ್ಲ!!! ಹೀಗಿದ್ದಲ್ಲಿ ಯಾವುದರಲ್ಲೂ ಆಸಕ್ತಿಯಿಲ್ಲದಿದ್ದರೆ ಜೀವನೆವೇ ಮುಗಿದುಹೋಯಿತಾ? ಯಾವುದಾದರೊಂದು ವಿಷಯದ ಬಗೆಗಾಗಲಿ. ಕೆಲಸದ ಬಗೆಗಾಗಲಿ ಆಸಕ್ತಿಯು ಏರಿಳಿತವಿಲ್ಲದೆ ಸಮವಾಗಿರುವುದು ಸಾಧ್ಯವೇ? ಹಳೆಯ ಕಹಿ ಘಟನೆಗಳನ್ನು ಮರೆಯುತ್ತಾ, ಸ್ನೇಹಿತರೊಂದಿಗೆ ಜೊತೆಗೂಡಿ ಕಳೆದ ಸಮಯವನ್ನು ನೆನೆಯುತ್ತಾ ಇಂದಿನ ಸ್ಥಿತಿಯನ್ನು ಶಪಿಸುತ್ತಾ, ಭವಿಷ್ಯತ್ತನ್ನು ಕಾಯುವುದು ಜೀವನವಾ? ಯಾವುದು ಜೀವನ??

ಹೀಗೆ ಹಲವಾರು ಪ್ರಶ್ನೆಗಳು. ಈ ಜೀವನದ ಬಗೆಗಿನ ಚರ್ಚೆಯಲ್ಲಿ ನನ್ನ ಮನಸ್ಸಿನ ಅಂಗಳದಲ್ಲಿ ಒಗಟುಗಳು ಅಲೆ ಅಲೆಯಾಗಿ ಒಗಟುಗಳು ಮೂಡುತ್ತಿವೆ. ದುಃಖಗೊಂಡಾಗ ಅಲೆಗಳು ಮನಸ್ಸನ್ನು ಪದೇ-ಪದೇ ಅಪ್ಪ್ಳಿಸುತ್ತಾ ಘಾಸಿಗೊಳಿಸುತ್ತಾ, ಸಂತೋಷವಾದಾಗ ಒಂದು ಉಲ್ಲಾಸದ ಭಾವನೆಯು ಮನಸ್ಸನ್ನು ತುಂಬಿಕೊಳ್ಳೂತ್ತದೆ. ಹೀಗೆ ನನ್ನ ಮನಸ್ಸಿನಲ್ಲಿ ಜೀವನದ ಬಗೆಗಿನ ಸತ್ಯಾನ್ವೇಷಣೆ ಶುರುವಾಗಿದೆ. ಈ ಅನ್ವೇಷಣೆಯು ಯಾವ ಮಟ್ಟಕ್ಕೇರಿ ಯಾವ ದಿಕ್ಕು ಹಿಡಿದು ಎಲ್ಲಿಗೆ ಮುಟ್ಟುತ್ತದೋ ನಾ ಕಾಣೆ. ಅಲ್ಲಿಯವರೆಗೆ ಜೀವನದ ಪಯಣದಲ್ಲಿ ನನ್ನ ಪಯಣ ಸಾಗುತ್ತಿರುತ್ತದೆ….. 
      ಭಾರತದಲ್ಲಿ ಈಗ ೨೮ ರಾಜ್ಯಗಳಿವೆ ಈ ರಾಜ್ಯದಲ್ಲಿ ಕರ್ನಾಟಕ ಕೂಡಾ ಒಂದು ಈ ಕರ್ನಾಟಕ ರಾಜ್ಯದಲ್ಲಿ ೨೭ ಜಿಲ್ಲೆಗಳಿವೆ, ಈಗ ಅಂದರೆ ಅಗಷ್ಟ ತಿಂಗಳಿನಲ್ಲಿ ೨೦೦೭ರಲ್ಲಿ ಎರಡು ಜಿಲ್ಲೆಗಳು ಹೊಸದಾಗಿ ಬಂದಿವೆ, ಅವುಗಳೆಂದರೆ ಚಿಕ್ಕ ಬಲಾಪುರ, ಹಾಗೂ ರಾಮನಗರ, ಈ ೨೭ ಜಿಲ್ಲೆಗಳಲ್ಲಿ ಕರ್ನಾಟಕವನ್ನು, ಉತ್ತರ ಕರ್ನಾಟಕ, ಹಾಗೂ ದಷ್ಕಿನ್ ಕರ್ನಾಟಕ. ಎಂದು ಎರಡು ಪ್ರಕಾರಗಳನ್ನು ಮಾಡಿದ್ದರೆ. ಆ ೨೭ ಜಿಲ್ಲೆಗಳಲ್ಲಿ ಬಾಗಲಕೋಟೆ ಎಂಬ ಜಿಲ್ಲೆ ಕೂಡಾ, ಬಾಗಲಕೋಟೆಯನ್ನು ಕೋಟೆಗಳ ಬಾಗಿಲು ಎಂದು ಕರೆಯಬಹುದು. ಏಕೆಂದರೆ ಈ ಜಿಲ್ಲೆಯಲ್ಲಿ ೬ ತಾಲೂಕುಗಳಿವೆ,
೧. ಬಾಗಲಕೋಟೆ 
೨. ಬದಾಮಿ
೩. ಹುನಗುಂದ 
೪. ಜಮಖಂಡಿ 
೫. ಮುದೋಳ 
೬. ಬಿಳಗಿ 
      ನನಗೆ ನೆನಪಾಗುವದು  ಬದಾಮಿ, ಹೈಹೊಲೆ, ಹಾಗೂ ಪಟ್ಟದಕಲ್ಲು, ಇಲ್ಲಿ ಅನೇಕ ರಾಜರುಗಳು ಜನಿಸಿದ ಭೂಮಿ ಇದು, ಅವರು ನೆನಪಿಗಾಗಿ ಅವರು ಕತ್ತಿರುವಂತಹ ಬಸದಿಗಳು, ಕೋಟೆ ಅತಿ ಪ್ರಾಚಿನ ಕಾಲದ ಭವ್ಯ ಬಂಗಲೆಗಳು,  ಬಾದಾಮಿಯ ಬನಶಂಕರಿಯ ದೇವಸ್ತಾನ, ಎಲ್ಲವು ಕಂಗೊಲಿಸುತವೆ, ಅಷ್ಟೇ ಅಲ್ಲದೆ ರನ್ನ ಕವಿ ಜನಸಿದ ಮುದೋಳ ತಾಲೂಕು ಸಹ ತುಂಬ ಚನ್ನಾಗಿದೆ, ಕವಿಯ ನೆನಪಿಗಾಗಿ ಮುದೋಳಿನಲ್ಲಿ ರನ್ನ ಕ್ರಿಡಾನ್ಗನವನ್ನು  ಕಟ್ಟಿದ್ದಾರೆ. ಎಲ್ಲಿ ಅರಮನೆಗಳಿವೆ, ಜಮಖಂಡಿಯಲ್ಲಿಯು ಸಹ ಅರಮನೆಗಳಿವೆ, ಎಲ್ಲಿ ಸುಮಾರಾಗಿ ಮುಸ್ಲಿಮರು ಜಾಸ್ತಿ ಏರುತಾರೆ, ತುಂಬಾ  ಓಲ್ಳೆಯವರು,  


ಡಾ.ಶ್ರೀ.ಶ್ರೀ. ಮಹಂತ
 
ಬಾಪುರೈ 
ಚನ್ನಮ್ಮ
ರಂಗೋಲಿ 
ಸಮರನ್ಬ 
ಕಾರ್ಮಿಕ್ ಫ್ಯಾಮಿಲಿ 
ಮಾಲ್ಲಪುರ್ 
ಮಣಿಪಾಲ

        

No comments:

Post a Comment